Swami vivekananda biography kannada
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ | |
---|---|
ಚಿಕಾಗೋದಲ್ಲಿ ವಿವೇಕಾನಂದರು, ಸೆಪ್ಟೆಂಬರ್ ೧೮೯೩. On the residue, Vivekananda wrote: ""One infinite unmovable and holy – beyond sense beyond qualities I bow sign to thee".".[೧] | |
ಜನನ | (೧೮೬೩-೦೧-೧೨)೧೨ ಜನವರಿ ೧೮೬೩ ಕಲ್ಕತ್ತಾ, ಬಂಗಾಳ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ (ಈಗ ಕೋಲ್ಕತಾ, ಪಶ್ಚಿಮ ಬಂಗಾಳ, ಭಾರತ) |
ಮರಣ | ಟೆಂಪ್ಲೇಟು:Death date 1902-7-1, and parents ವಿಶ್ವನಾಥ ದತ್ತ.
ತಾಯಿ ಭುವನೇಶ್ವರಿ ದೇವಿ |
ಜನ್ಮ ನಾಮ | ನರೇಂದ್ರನಾಥ ದತ್ತ |
ಸಂಸ್ಥಾಪಕರು | ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ |
ಗುರು | ರಾಮಕೃಷ್ಣ ಪರಮಹಂಸ |
ತತ್ವಶಾಸ್ತ್ರ | ವೇದಾಂತ |
ಪ್ರಮುಖ ಕೃತಿಗಳು | ರಾಜ ಯೋಗ, ಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ |
ಪ್ರಮುಖ ಶಿಷ್ಯರು/ಅನುಯಾಯಿಗಳು | ಸ್ವಾಮೀ ಅಶೋಕಾನಂದ, ಸ್ವಾಮಿ ವಿರಜಾನಂದ, ಸ್ವಾಮಿ ಪರಮಾನಂದ, ಅಳಸಿಂಗ ಪೆರುಮಾಳ್, ಸ್ವಾಮೀ ಅಭಯಾನಂದ, ಸೋದರಿ ನಿವೇದಿತಾ, ಸ್ವಾಮಿ ಸದಾನಂದ |
Influence on
| |
ನುಡಿ | ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. |
ಹಸ್ತಾಕ್ಷರ |
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ.
ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಒಡನಾಟ :
- ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು.
ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
- ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು.
ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
- ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
- ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು.
೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
- ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು.
ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
- ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು.
೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
- ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು.
ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.
ರಾಮಕೃಷ್ಣ ಮಠದ ಸ್ಥಾಪನೆ
- ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು.
ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
- ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
- ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು.
ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..
ವಿವೇಕಾನಂದರ ಭಾರತ ಪರ್ಯಟನೆ
೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೆಶ್ನ್ ಆಫ್ ಕ್ರೈಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಉತ್ತರ ಭಾರತ
೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು "ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ" ಎಂದು ಪ್ರಶಂಸಿಸಿದರು.
ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.
ಅದ್ವೈತ ಸಿದ್ಧಾಂತದ ಉಪಯುಕ್ತತೆ
- ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು.
ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
- ಇದೇ ಅವರ ಮಂತ್ರವಾಯಿತು ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
- ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
- ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು.
ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
- ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು.
ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
- ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
- ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ.
ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
- ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ.
ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ
- ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು.
ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
- 'ವಿಶ್ವದ ಧರ್ಮಗಳ ಸಂಸತ್ತು' ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, "ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ" ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು.
ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು.
- Aari actor biography
ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು"ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ") ನಂತರ "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!" ಎಂದು ಸಂಬೋಧಿಸಿ ಮಾತು ಆರಂಭಿಸಿದರು.
ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ 'ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ' ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!" (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
- 'ವಿಶ್ವದ ಧರ್ಮಗಳ ಸಂಸತ್ತು' ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, "ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ" ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು.
- ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು.
'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
- ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
- 'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ.
ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು".
ಸ್ವದೇಶ ಮಂತ್ರ
- ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ.
ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
- ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ.
ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
- ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು.
ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
- ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು ತಮ್ಮಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು.
ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.
[೨]
ಕುವೆಂಪುರವರ 'ಸ್ವಾಮಿ ವಿವೇಕಾನಂದ'
- ನಮ್ಮ ರಾಷ್ಟ್ರ ಕವಿ ಕುವೆಂಪುರವರು 'ಸ್ವಾಮಿ ವಿವೇಕಾನಂದ'ರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು ಅವರ ಜೀವನದ ಪರಿಚಯವನ್ನು ಮಾಡಿಸುತ್ತದೆ.ಬೇಲೂರಿನ ರಾಮಕೃಷ್ಣ ಮಠಕ್ಕೆ ಆಗಿಂದಾಗ ಭೇಟಿಯನ್ನು ನೀಡುತ್ತಿದ್ದರು.